Monday, June 11, 2007

ಭಾವಗೀತೆ

ಮಳೆಗಾಲದ ಪ್ರಕೃತಿಯ ಸೊಬಗನ್ನು ಸಂಪೂರ್ಣವಾಗಿ ಚಿತ್ರಿಸಿರುವ ಈ ಭಾವಗೀತೆಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಕಣವಿಯವರ ಸುಂದರ ಸಾಲುಗಳು, ಅಶ್ವಥ್‍ರವರ ಸುಮಧುರ ಸಂಗೀತ ಸಂಯೋಜನೆ ಹಾಗೂ ಛಾಯಾರವರ ಇಂಪಾದ ಗಾಯನ ಈ ಗೀತೆಯಲ್ಲಿ ಮೇಳೈಸಿವೆ.
ಓದಿ, ನೋಡಿ, ಕೇಳಿ ಆನಂದಿಸಿ.

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತಿತ್ತು

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು

ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು



-ಮನು

Sunday, April 29, 2007

ರಾಜಣ್ಣನ ವಿಡಿಯೋಗಳು

ನಾನು ಎರಡು ಡಾ. ರಾಜ್‍ಕುಮಾರ್ ಅವರ ವಿಡಿಯೋಗಳನ್ನು youtube ಹಾಗು google video ದಲ್ಲಿ ಪೋಸ್ಟಿಸಿದ್ದಿನಿ.
ನೋಡಿ ಆನಂದಿಸಿ.
೧. ಬಬ್ರುವಾಹನ:


೨. ಮಯೂರ:


http://video.google.com/videoplay?docid=-9090832471361263944
- ಮನು

Tuesday, February 13, 2007

Top 10 ಗೀತೆಗಳು

ಎಲ್ಲರಿಗೂ ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು…

ಕನ್ನಡ ಚಲಚಿತ್ರಗಳಲ್ಲಿ ಸಹಸ್ರಾರು ಪ್ರೇಮ ಗೀತೆಗಳಿವೆ, ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ, ಹಾಗೆ ಅವುಗಳನ್ನು ಮೆಲುಕು ಹಾಕಿ, ಪ್ರೇಮ ಲೋಕದಲ್ಲಿ ವಿಹರಿಸಿ.


10.
ಚಿತ್ರ: ಅಮೃತಧಾರೆ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ
ಹಾಡು ಕೇಳಿ
ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕೂ ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ
ಹೇ ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ಹೇ ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ
ನೆನಪಿದೆಯೆ ಮೊದಲಾ ನೋಟ
ನೆನಪಿದೆಯೆ ಮೊದಲಾ ಸ್ಪರ್ಶ
ನೆನಪಿದೆಯೆ ಮತ್ತನು ತಂದಾ ಆ ಮೊದಲ ಚುಂಬನಾ
ನೆನಪಿದೆಯೆ ಮೊದಲಾ ಕನಸು
ನೆನಪಿದೆಯೆ ಮೊದಲಾ ಮುನಿಸು
ನೆನಪಿದೆಯೆ ಕಂಬನಿ ತುಂಬಿ..ನೀನಿತ್ತ ಸಾಂತ್ವನ
ನೀನಿಲ್ಲದೆ ನಾ ಹೇಗೆ ಬಾಳಲೀ ನೀ ಅಮೃತಧಾರೆ
ನೆನಪಿದೆಯೆ ಮೊದಲಾ ಸರಸ
ನೆನಪಿದೆಯೆ ಮೊದಲಾ ವಿರಸ
ನೆನಪಿದೆಯೆ ಮೊದಲು ತಂದಾ ಸಂಭ್ರಮದ ಕಾಣಿಕೆ
ನೆನಪಿದೆಯೆ ಮೊದಲಾ ಕವನ
ನೆನಪಿದೆಯೆ ಮೊದಲಾ ಪಯಣ
ನೆನಪಿದೆಯೆ ಮೊದಲಾ ಮಿಲನ..ಭರವಸೆಯ ಆಸರೆ
ನೀನಿಲ್ಲದೆ ನಾ ಹೇಗೆ ಬಾಳಲೀ ನೀ ಅಮೃತಧಾರೆ

9.
ಚಿತ್ರ: ಮಾನಸ ಸರೋವರ
ಸಾಹಿತ್ಯ: ಎಮ್. ಎನ್. ವ್ಯಾಸರಾವ್
ಹಾಡು ಕೇಳಿ
ಚೆಂದ ಚೆಂದ ಸಂಗಾತಿ ನೋಟವೆ ಚೆಂದ
ಅಂದ ಅಂದ ಗುಲಾಬಿ ತೋಟವೆ ಅಂದ
ಹಿಮದ ಮಣಿಗೆ ಎಂದೆಂದು ತಾವರೆ ಧ್ಯಾನ
ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ
ದುಂಬಿಗೆ ಸುಮದ ಮಕರಂದ ಹೀರುವ ಧ್ಯಾನ
ಗಿರಿಗೆ ಮುಗಿಲ ಕೂಗಿ ಚುಂಬಿಸೊ ಧ್ಯಾನ
ಬನಕೆ ಚೆಂದ ವಸಂತ ಕೋಗಿಲೆ ಗಾನ
ಕವಿಯ ಕಲೆಗೆ ಚೆಲುವು ನೀಡಿದ ಗಾನ
ಭೂಮಿಗೆ ಸೂರ್ಯ ಚೆಂದ್ರರ ಬೆಳಕಿನ ಗಾನ
ಪ್ರೇಮಿಗೆ ಪ್ರಿಯಳ ಬಾಚಿ ಅಪ್ಪುವ ಧ್ಯಾನ

8.
ಚಿತ್ರ: ಮುಂಗಾರು ಮಳೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡು ಕೇಳಿ
ಅನಿಸುತಿದೆ ಯಾಕೊ ಇಂದು..ನೀನೇನೆ ನನ್ನವಳಿದ್ದು
ಮಾಯದ ಲೋಕದಿಂದ..ನನಗಾಗೆ ಬಂದವಳಿದ್ದು
ಆಹಾ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು
ಸುರಿಯುವ ಸೋನೆಯು ಸೂಸಿದೆ..ನಿನ್ನದೆ ಪರಿಮಳ
ಇನ್ನು ಯಾರ ಕನಸಲೂ..ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜ ಹಾಕಿದೆ..ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೆ ಸೆರೆಮನೆ
ತಪ್ಪಿ ನನ್ನ ಅಪ್ಪಿಕೊ ಒಮ್ಮೆಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು..
ತುಟಿಗಳ ಹೂವಲಿ..ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ..ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ..ಹೃದಯದಿ ನಾನೆ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು

7.
ಚಿತ್ರ: ರಾಜ ನನ್ನ ರಾಜ
ಸಾಹಿತ್ಯ: ಚಿ. ಉದಯಶಂಕರ್
ಹಾಡು ಕೇಳಿ
ನೂರು ಕಣ್ಣು ಸಾಲದು...
ನೂರು ಕಣ್ಣು ಸಾಲವು ನಿನ್ನ ನೋಡಲು
ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು
ಯಾರ ಕನಸ ಕನ್ಯೆಯೋ ಶೃಂಗಾರ ಕಾವ್ಯವೋ
ಈ ಹೊಳೆವ ಕಣ್ಣ ನೋಟ ಮುಂಗುರುಳ ತೂಗುವಾಟ ಈ ಚೆಲುವ ಮೈಯ ಮಾಟ
ಬಂಗಾರದ ಸಿಂಗಾರಿ ಕಂಡು ಮೂಕನಾದೆನು
ನೂರು ವರುಷವಾಗಲಿ ಮರೆಯಲಾರೆನು
ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು
ಜನುಮ ಜನುಮದಲ್ಲೂ ನೀನು ನನ್ನವಳೇನೇ
ಈ ಮೋಹ ತಿಳಿಯಲಾರೆ ನೀ ನನ್ನ ಅರಿಯಲಾರೆ ನೀ ಇರದೆ ಬಾಳಲಾರೆ
ನಾ ಎಲ್ಲಿರಲಿ ನೀನೆ ನನ್ನ ಜೀವದ ಜೀವ

6.
ಚಿತ್ರ: ತಾಯಿಯ ಹೊಣೆ
ಸಾಹಿತ್ಯ: ಚಿ.ಉದಯಶಂಕರ್
ಹಾಡು ಕೇಳಿ
ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
ನಿನ್ನ ಸ್ನೇಹ ನಿನ್ನ ಪ್ರೇಮ ಕನಸಿನ ಸಿರಿಯೋ
ಅರಳಿದ ತಾವರೆ ಹೂವಿನ ಹಾಗೆ ಚೆಲುವೆಯ ಮೊಗವು
ಚಂದ್ರನ ಕಂಡ ನೈದಿಲೆಯಂತೆ ನಿನ್ನ ಈ ನಗುವೋ
ಕಾಮಿನಿ ಅರಗಿಣಿ
ನಿನ್ನ ನುಡಿಗಳು ವೀಣೆ ಸ್ವರಗಳು ಅರಿಯದೆ ಹೋದೆ
ಗೆಳತಿ ಬೆರಗಾದೆ
ಮನದಲಿ ತುಂಬಿ ಹೃದಯದಿ ತುಂಬಿ ಆಸೆ ತಂದಿರುವೆ
ನೆನಪಲಿ ನಿಂತು ನಯನಗಳಲ್ಲಿ ಕನಸ ತುಂಬಿರುವೆ
ಮೋಹವೋ ವಿರಹವೋ
ನಿನ್ನ ಸೇರದೆ ಕೂಡಿ ಬಾಳದೆ ಜೀವ ನಿಲ್ಲುವುದೆ
ಶಾಂತಿ ದೊರಕುವುದೆ

5.
ಚಿತ್ರ: ಮಾಂಗಲ್ಯ ಭಾಗ್ಯ
ಸಾಹಿತ್ಯ: ವಿಜಯನಾರಸಿಂಹ
ಹಾಡು ಕೇಳಿ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೆ
ಹೆಜ್ಜೆಯ ಭಾವಕೆ ಹಂಸವೆ ನಾಚಿದೆ
ಗಾಳಿಯ ಬೀಸಿನಲಿ ಗಾನವು ನೀನಾದೆ
ನನ್ನೆದೆ ಸ್ಪಂದನ ನಿನ್ನದೆ ಚೇತನ
ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆಆಸೆಯ ಭಾವ

4.
ಚಿತ್ರ: ಗಾಳಿಮಾತು
ಸಾಹಿತ್ಯ: ಚಿ.ಉದಯಶಂಕರ್
ಹಾಡು ಕೇಳಿ
ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇಒಮ್ಮೆ ನಿನ್ನನ್ನೂ.
ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮನದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ನಿನ್ನ ಚಂದವಾ
ತಂಪಾದ ಗಾಳಿಯಲ್ಲಿ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡೂ ಬೆರೆಗಾದೆ

3.
ಚಿತ್ರ: ಬಯಲುದಾರಿ
ಸಾಹಿತ್ಯ: ಚಿ. ಉದಯಶಂಕರ್
ಹಾಡು ಕೇಳಿ
ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೆ!
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ
ತೇಲುವ ಈ ಮೋಡದ ಮೇಲೆ ನೀ ನಿಂತ ಹಾಗಿದೆ
ನಸು ನಗುತ ನಲಿ ನಲಿದು ನನ್ನ ಕೂಗಿದಂತಿದೆ
ತೇಲುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ
ತನುವೆಲ್ಲ ಹಗುರಾಗಿ ತೇಲಾಡುವಂತಿದೆ! ಹಾಡುವಂತಿದೆ
ಚೆಲುವೆ ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಕಣ್ಣಲ್ಲೆ ಒಲವಿನ ಗೀತೆ ನೀನು ಹಾಡಿದಂತಿದೆ
ನಿನ್ನಾಸೆ ಅತಿಯಾಗಿ ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೊ ಭಾಗ್ಯ ನನ್ನದಾಗಿದೆ
ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ ಭವ್ಯವಾಗಿದೆ

2.
ಚಿತ್ರ: ಮೈಸೂರ ಮಲ್ಲಿಗೆ
ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
ಹಾಡು ಕೇಳಿ
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು
ಸಾಗರನ ಹೃದಯದಲಿ ರಕ್ತಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ
ಅಲೆಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ

1.
ಚಿತ್ರ: ಮರೆಯಲಾಗದ ಕಥೆ
ಸಾಹಿತ್ಯ: ಚಿ. ಉದಯಶಂಕರ್
ಹಾಡು ಕೇಳಿ
ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ
ಹುಣ್ಣಿಮೆಯ ದೀಪದಲ್ಲಿ ತಣ್ಣನೆಯ ರಾತ್ರಿಯಲ್ಲಿ
ಸಂಪಿಗೆಯ ಕಂಪಿನಲ್ಲಿ ಇಂಪಾದ ರಾಗದಲಿ
ನಾ ಬರೆಯುವೆ
ಅರಗಿಣಿಯ ಭಾಷೆಯಲ್ಲಿ ಕೋಗಿಲೆಯ ರಾಗದಲ್ಲಿ
ಹಂಸನಡೆ ತಾಳದಲ್ಲಿ ಮುತ್ತಂಥ ಮಾತಿನಲಿ
ಹೊಸ ಕವಿತೆಯ ಓ ಗೆಳತಿ ಬರೆಯುವೆ
ಹೂಬನದಿ ಆಯ್ದು ತಂದ ಮೊಗ್ಗಾದ ಮಲ್ಲಿಗೆಯಿಂದ
ಸವಿಜೇನ ಹನಿಹನಿಯಿಂದ ಪ್ರಣಯದ ಆನಂದದಿಂದ
ನಾ ಬರೆಯುವೆ
ನನ್ನಂತರಾಳದಿಂದ ಪುಟಿದೇಳೋ ಭಾವದಿಂದ
ಬಯಕೆಗಳ ಭಾರದಿಂದ ಕಣ್ಣುಗಳ ಮಿಂಚಿನಿಂದ
ಹೊಸ ಕವಿತೆಯ ಓ ಗೆಳತಿ ಬರೆಯುವೆ